ವರನಟ ಡಾ. ರಾಜ್‌ಕುಮಾರ್‌ ಕರುನಾಡಿನ ದೇವರು. ಅಪ್ಪಾಜಿಗೆ ಅವರ ನೇಟಿವ್‌ ಗಾಜನೂರು ಅಂದ್ರೆ ಬಲುಪ್ರೀತಿ. ಇದೇ ಮೊದಲ ಬಾರಿಗೆ ಡಾ. ರಾಜ್ ನಿವಾಸದ ಮುಂದೆ "ಖಡಕ್ ಹಳ್ಳಿ ಹುಡುಗರು" ಚಿತ್ರದ ಮುಹೂರ್ತ ಸಮಾರಂಭ ನಡೆದಿದೆ. ಈ ಸಿನಿಮಾದಲ್ಲಿ ರಾಘವೇಂದ್ರ ರಾಜ್‌ಕುಮಾರ್‌ ವಿಶೇಷ ಪಾತ್ರದಲ್ಲಿ ಮಿಂಚಲಿದ್ದಾರೆ.


COMMERCIAL BREAK
SCROLL TO CONTINUE READING

ವರನಟ ಡಾ. ರಾಜಕುಮಾರ್(Dr Rajkumar) ಅವರ ಊರು ಗಾಜನೂರು. ಇದು ಅಣ್ಣಾವ್ರ ನೆಚ್ಚಿನ ಊರು ಕೂಡ ಹೌದು. ಎಂ.ಯು.ಪ್ರಸನ್ನ ಹಳ್ಳಿ ನಿರ್ದೇಶನದ ಈ ಚಿತ್ರದಲ್ಲಿ ರಾಘವೇಂದ್ರ ರಾಜ್‌ಕುಮಾರ್ ವಿಶೇಷ ಪಾತ್ರದಲ್ಲಿ ನಟಿಸುತ್ತಿದ್ದಾರೆ. PPP ಕ್ರಿಯೇಷನ್ಸ್ ಲಾಂಛನದಲ್ಲಿ ಪುನೀತ್ ಪಟೇಲ್ ನಿರ್ಮಿಸುತ್ತಿರುವ "ಖಡಕ್ ಹಳ್ಳಿ ಹುಡುಗರು"(Khadak Halli Hudugaru Movie) ಚಿತ್ರದ ಮೊದಲ ದೃಶ್ಯದ ಚಿತ್ರೀಕರಣಕ್ಕೆ ಡಾ. ರಾಜ್‌ಕುಮಾರ್ ಅವರ ಸಹೋದರಿ ನಾಗಮ್ಮ ಹಾಗೂ ರಾಘವೇಂದ್ರ ರಾಜ್‌ಕುಮಾರ್ ಪತ್ನಿ ಮಂಗಳ ರಾಘವೇಂದ್ರ ರಾಜ್‌ಕುಮಾರ್ ಕ್ಯಾಮರಾ ಚಾಲನೆ ಮಾಡಿದರು. ನಾಗಮ್ಮನವರ ಪುತ್ರ ಗೋಪಾಲ್ ಆರಂಭ ಫಲಕ ತೋರಿಸಿದರು. ಗಾಜನೂರಿನಲ್ಲಿ‌‌ ಮುಹೂರ್ತವಷ್ಟೇ ಅಲ್ಲ, ಕೆಲವು ಭಾಗದ ಚಿತ್ರೀಕರಣ ಸಹ ಮಾಡಿದ್ದೇವೆ ಎಂದು ನಿರ್ದೇಶಕರು ತಿಳಿಸಿದ್ದಾರೆ. 


ಇದನ್ನೂ ಓದಿ : ಕರ್ನಾಟಕ ಬಳಿಕ ಗೋವಾದಲ್ಲಿಯೂ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾಗೆ ತೆರಿಗೆ ವಿನಾಯಿತಿ


ನಮ್ಮ ತಂದೆಯವರ ಊರಿನಲ್ಲಿ ಈ ಚಿತ್ರದ ಮುಹೂರ್ತ ಮಾಡಿರುವುದು ಹಾಗೂ ನಮ್ಮ ಅತ್ತೆ ನಾಗಮ್ಮ ಅವರು ಕ್ಯಾಮರಾ ಚಾಲನೆ ಮಾಡಿದ್ದು ಖುಷಿಯಾಗಿದೆ ಎಂದು ರಾಘಣ್ಣ ಹೇಳಿದ್ರು. ಕೆಲವು ದಿನಗಳ ಹಿಂದೆ ಈ ಚಿತ್ರಕ್ಕಾಗಿ ರಾಘವೇಂದ್ರ ರಾಜ್‌ಕುಮಾರ್(Raghavendra Rajkumar) ಅವರು ಹಾಡಿದ್ದ ಕನ್ನಡದ ಹಾಡೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಹಿಟ್ ಆಗಿದೆ. ಹಳ್ಳಿ ಹುಡುಗರು ಪಟ್ಟಣಕ್ಕೆ ಬಂದು ತಮಗೆ ಎದುರಾಗುವ ಸಮಸ್ಯೆಗಳನ್ನು ಆತ್ಮಸ್ಥೈರ್ಯದಿಂದ ಹೇಗೆ ಎದುರಿಸುತ್ತಾರೆ ಎಂಬುದೇ ಚಿತ್ರದ ಕಥಾಹಂದರ.


ಗಾಜನೂರು, ಮಂಡ್ಯ ಆಸುಪಾಸಿನಲ್ಲಿ ಈ ಸಿನಿಮಾದ ಮೊದಲ ಹಂತದ ಚಿತ್ರೀಕರಣ(Khadak Halli Hudugaru Movie Shooting) ನಡೆಯಲಿದೆ. ಚಿತ್ರದಲ್ಲಿ ಆರು ಹಾಡುಗಳಿದ್ದು, ಸಧೀರ್ ಶಾಸ್ತ್ರಿ ಮೂರು ಹಾಡುಗಳು ಹಾಗೂ ಹದಿನಾಲ್ಕು ವರ್ಷದ ಧ್ರುವ ಮೂರು ಹಾಡುಗಳಿಗೆ ಸಂಗೀತ ನೀಡಿದ್ದಾರೆ. ಯಶ್ ಗೌಡ ಈ ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದಾರೆ. ರಾಜೀವ್ ರಾಥೋಡ್,  ಪ್ರಭಾಸ್ ರಾಜ್ ಹಾಗೂ ಪ್ರಭು ನಾಯಕರಾಗಿ ನಟಿಸುತ್ತಿರುವ ಈ ಚಿತ್ರದ ವಿಶೇಷ ಹಾಗೂ ವಿಭಿನ್ನ ಪಾತ್ರದಲ್ಲಿ ರಾಘವೇಂದ್ರ ರಾಜ್‌ಕುಮಾರ್ ಅಭಿನಯಿಸುತ್ತಿದ್ದಾರೆ. ಯುಕ್ತ ಮಲ್ನಾಡ್, ದೀಪು ವಿಜಯ್, ಚಂದ್ರಪ್ರಭ, ವರದರಾಜ್, ಮಹಂತೇಶ್, ಉದಯ್  ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.


ಇದನ್ನೂ ಓದಿ : ST Somashekar: ‘ಗರಡಿ’ ಸಿನಿಮಾದ ಮೂಲಕ ಸಿನಿ ರಂಗಕ್ಕೆ ಎಂಟ್ರಿ ಕೊಟ್ಟ ಸಹಕಾರ ಸಚಿವರು


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.